Thursday 1 January 2015

ಮುಂಗಾರು ಮಳೆಯೇ (ಮುಂಗಾರು ಮಳೆ)

 ಮುಂಗಾರು  ಮಳೆಯೇ , ಏನು  ನಿನ್ನ  ಹನಿಗಳ  ಲೀಲೆ
ನಿನ್ನ  ಮುಗಿಲ  ಸಾಲೆ , ಧರೆಯ  ಕೊರಳ  ಪ್ರೇಮದ  ಮಾಲೆ
ಸುರಿವ  ಒಲುಮೆಯ  ಜಡಿ  ಮಳೆಗೆ , ಪ್ರೀತಿ  ಮೂಡಿದೆ
ಯಾವ  ಚಿಪ್ಪಿನಲ್ಲಿ , ಯಾವ  ಹನಿಯು  ಮುತ್ತಗುವ್ದೋ
ಒಲವು  ಎಲ್ಲಿ  ಕುಡಿಯೊಡೆಯುವುದೋ , ತಿಳಿಯದಾಗಿದೆ
ಮುಂಗಾರು  ಮಳೆಯೇ , ಏನು  ನಿನ್ನ  ಹನಿಗಳ  ಲೀಲೆ

ಭುವಿ  ಕೆನ್ನೆ  ತುಂಬಾ , ಮುಗಿಲು  ಸುರಿದ  ಮುತ್ತಿನ  ಗುರುತು
ನನ್ನ  ಎದೆಯ  ತುಂಬಾ , ಅವಳು  ಬಂಡ  ಹೆಜ್ಜೆಯ  ಗುರುತು
ಹೆಜ್ಜೆ  ಗೆಜ್ಜೆಯ  ಸವಿ  ಸದ್ದು , ಪ್ರೇಮನಾದವೋ
ಎದೆ  ಮುಗಿಲಿನಲ್ಲಿ , ರಂಗು  ಚೆಲ್ಲಿ  ನಿಂತಳು  ಅವಳು
ಬರೆದು  ಹೆಸರ  ಕಾಮನಬಿಲ್ಲು , ಏನು  ಮೋಡಿಯೋ
ಮುಂಗಾರು  ಮಳೆಯೇ  ಏನು  ನಿನ್ನ  ಹನಿಗಳ  ಲೀಲೆ .

ಯಾವ  ಹನಿಗಳಿಂದ , ಯಾವ  ನೆಲವು  ಹಸಿರಾಗುವುದೋ
ಯಾರ  ಸ್ಪರ್ಶದಿಂದ , ಯಾರ  ಮನವು  ಹಸಿಯಾಗುವುದೋ
ಯಾರ  ಉಸಿರಲ್ಯಾರ  ಹೆಸರೋ , ಯಾರು  ಬರೆದರೋ
ಯಾವ  ಪ್ರೀತಿ  ಹೂವು , ಯಾರ  ಹೃದಯದಲ್ಲರಳುವುದೋ
ಯಾರ  ಪ್ರೇಮ  ಪೂಜೆಗೆ  ಮುಡಿಪೋ , ಯಾರು  ಬಲ್ಲರು
ಮುಂಗಾರು  ಮಳೆಯೇ , ಏನು  ನಿನ್ನ  ಹನಿಗಳ  ಲೀಲೆ

ಒಲವ  ಚಂದಮಾಮ , ನಗುತ  ಬಂದ  ಮನದಂಗಳಕೆ
ಪ್ರೀತಿ  ಬೆಳಕಿನಲ್ಲಿ , ಹೃದಯ  ಹೊರಟಿದೆ  ಮೆರವಣಿಗೆ
ಅವಳ  ಪ್ರೇಮದೂರಿನ  ಕಡೆಗೆ , ಪ್ರೀತಿ  ಪಯಣವು
ಪ್ರಣಯದೂರಿನಲ್ಲಿ , ಕಳೆದು  ಹೋಗೋ  ಸುಖವ  ಇಂದು
ಧನ್ಯನಾದೆ  ಪಡೆದು  ಕೊಂದು , ಹೊಸ  ಜನ್ಮವು
ಮುಂಗಾರು  ಮಳೆಯೇ , ಏನು  ನಿನ್ನ  ಹನಿಗಳ  ಲೀಲೆ

ತೂಕಡಿಸಿ ತೂಕಡಿಸಿ (ಪಡುವಾರಹಳ್ಳಿ ಪಾಂಡವರು)

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ 
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ 
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ

ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆಬರಹವೆಂದು
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಹಾಕ್ಕಿಟ್ಟ ಹುಯ್ಗಂಜಿ ತುಂಡು ತಂಬಲಿಗೆ ಸಾವಿಟ್ಟರೋ ಕೊರಳ ಜೀತದ ಕತ್ತರಿಗೆ
ಬಿಕ್ಕೆಟ್ಟರೋ ನರಳಿ ಜೀವಶದಂತೆ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಬದುಕನ್ನು ಎದುರಿಸಲು ಕಣ್ತೆರೆದು ನೋಡಾ ಬೆದೆರಿಕೆಗೆ ಕೈ ಕಟ್ಟಿ ಆಳಾಗ ಬೇಡ
ಕೊಚ್ಚೆಯ ಹುಳುವಂತೆ ಕುರುಡಾಗ ಬೇಡ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ 
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ

Watch Video

Wednesday 5 November 2014

ಜಾಕಿ ಜಾಕಿ ಜಾಕಿ ಜಾಕಿ "ಜಾಕಿ"

ಮಾರಮ್ಮನ ಜಾತ್ರೆ ದಿಸ, ಕೋಣ ಕಡಿಯೋ ಟೈಮಿನಲ್ಲಿ,  
ಬೆಂದು  ಭತ್ತ ಸೇಲ್ ಆಗೋಯ್ತು, ರಾತ್ರಿ ಹೊತ್ತು ಲೇಟ್ ಆಗೋಯ್ತು,
ಬೀದಿ ದೀಪ  ಆಫ್ ಆಗೋಯ್ತು , ಮಾರಮ್ಮಂಗು ಬೋರ್ ಆಗೋಯ್ತು 
ನೋಡವರ್ಗು ನೋಡಿ ಒಬ್ಳು, ತಾಯಿ ಮಗುವ ಹೆತ್ಥೆಬಿಟ್ಲು 
ಹುಟ್ಟಿಗೊಂದು ರೀಸನ್ ಇಲ್ಲ, ಇರೋದುಕ್ಕು ಸೀಸನ್ ಇಲ್ಲ 
ಹೆಸರು  ಗಿಸ್ರಲ್ಲೆನಯ್ತ್ಹ್ರಪ್ಪ .. ಹಾಗೆ ಸ್ವಲ್ಪ ಕೂಗ್ಬೇಕಪ್ಪ
ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ 
ಜಾನಕಿರಾಮ ಚಡ್ಡಿ ತುಣುಕು ಜಾಕಿ  ಜಾಕಿ  ಜಾಕಿ  ಜಾಕಿ 

music 

ಒಳ್ಳೆವ್ರಿಗೂ ಒಳ್ಳೆವ್ನಪ್ಪ, ಕೆಟ್ಟವರಿಗೂ ಒಳ್ಳೆವ್ನಪ್ಪ
ಲವ್ ಮಾಡಲ್ಲ, ಇಲ್ಲಿ ತನಕ, ಹನುಮಂಥಾನೆ ಇವನ ಭಕ್ತ 
ನಂಬರ್ ಒನ್ ಉ ಕೊನೆ, ತನಕ, ತುಂಬ ಸಾಚ, ಸುಳ್ಳು ಬುರ್ಕ
ಒಳ್ಳೆ ಮಾನುಷ ಹಂಗನ್ಭಾಹುದು, ಸಂಜೆ ಮೇಲೆ ಸಿಗ್ಲೆಬಾರ್ದು
ಇಂತವ್ನೊಬ್ಬ ಇದ್ರೆ ನೋಡು, ಓಒರುದ್ದರ ಆದಂಗೆನೆ 
ಹೆಚ್ಚು ಕಡಿಮೆ ಅರ್ಧ ಊರು, ಇವನ ಹೆದರಿ ಬೆಳದಂಗೆನೆ  
ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ 
ಜಾನಕಿರಾಮ ಚಡ್ಡಿ ತುಣುಕು ಜಾಕಿ  ಜಾಕಿ  ಜಾಕಿ  ಜಾಕಿ 

music

ಸಾಲ ಅಂದ್ರೆ ತುಂಬ ಇಷ್ಟ, ಸಾಲ ಕೊಟ್ಟವನು ಅಲ್ಲೇ ಸತ್ತ
ಕೆಲಸ ಏನು ಮಾಡ್ತ್ಹಾನಂಥ ದುಮ್ಮಿದೊವ್ನು ಕೆಳ್ಕೊಲ್ರಪ್ಪ
ಮರಳು ದಿನ್ನು, ಬಾಲೆ ಹಣ್ಣು , ಪುನ್ಚರ್  ಅಂಗಡಿ, ಪಾನಿ ಪೂರಿ,
ರಾಗಿ  ಮಷೀನ್ , ಬಡ್ಡಿ  ಸಾಲ , ರಿಯಲ್  ಎಸ್ಟೇಟ್ , ಮೋರಿ  ಕ್ಲೀನು  ,
ಮೇಕೆ  ತಿನ್ನದ  ಸೊಪ್ಪೇ  ಇಲ್ಲ , ಇವನು  ತಿನ್ನದ  ಮೇಕೆ  ಇಲ್ಲ  
ಅರವತ್ನಾಲ್ಕು  ವಿದ್ಯೆ  ಗೊತ್ತ, ಇರೋದೊಬ್ನೆ  ನಮ್ಮ  ಬೋಸ್ಸು 
ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ 
ಜಾನಕಿರಾಮ ಚಡ್ಡಿ ತುಣುಕು ಜಾಕಿ  ಜಾಕಿ  ಜಾಕಿ  ಜಾಕಿ 

music

ಜಾಸ್ತಿ ನಿಯತಲ್ಲಿ ಪಾಪ ಕಂಕಣ ಭಾಗ್ಯ ಕೂಡ್ಲೇ ಇಲ್ಲ
ಹುತ್ತುಸ್ಥಾನೆ  ಚಿಲ್ರೆ  ಕಾಸು  ತಡ್ಕೊಬೇಕು ಸ್ವಲ್ಪ  ಲೂಸು  
ಡಿಚ್ಹಿ  ಮಾತ್ರ  ಮಿಸ್ಸೆ  ಇಲ್ಲ  ಜಾಸ್ತಿ  ಹೇಳಿ , ಯುಸ್  ಆಗಲ್ಲ.
ಹೆಂಗು  ನಿಮಗೆ  ಟೈಮೇ  ಇಲ್ಲ   ನಮಗೂ  ಬೇರೆ  ಗ್ಯಪೆ  ಇಲ್ಲ 
ಮುಂದೆ  ನೀವೇ  ನೋಡ್ತೀರಲ್ಲ   ಮಾತಾಡೋಣ  ಸಿಗ್ತೀವಲ್ವ 
ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ  ಜಾಕಿ 
ಜಾನಕಿರಾಮ ಚಡ್ಡಿ ತುಣುಕು ಜಾಕಿ  ಜಾಕಿ  ಜಾಕಿ  ಜಾಕಿ 

ಬೈ-ಟೂ  ಟೀ  ಕೊಡ್ರಪ್ಪ 

Sunday 2 November 2014

ಶಿಶುನಲ್ ಷರೀಫ್ "ಸೋರುತಿಹುದು ಮಣಿಯ ಮಾಳಿಗಿ"

ಸೋರುತಿಹುದು ಮಣಿಯ  ಮಾಳಿಗಿ,
ಸೋರುತಿಹುದು ಮಣಿಯ  ಮಾಳಿಗಿ, ಅಜ್ಞಾನದಿಂದ 
ಸೋರುತಿಹುದು ಮಣಿಯ ಮಾಳಿಗಿ

music

ಸೋರುತಿಹುದು ಮಣಿಯ ಮಾಳಿಗಿ
ದಾರು ಗಟ್ಟಿ ಮಾಲ್ಪರಿಲ್ಲ 
ಸೋರುತಿಹುದು ಮಣಿಯ ಮಾಳಿಗಿ
ದಾರು ಗಟ್ಟಿ ಮಾಲ್ಪರಿಲ್ಲ 
ಕಾಲಕತ್ತಲೆಯೊಳಗೆ  ನಾನು 
ಮೇಲಕೇರಿ  ಮೆಟ್ಟಲಾರೆ 

ಸೋರುತಿಹುದು ಮಣಿಯ ಮಾಳಿಗಿ, ಅಜ್ಞಾನದಿಂದ 
ಸೋರುತಿಹುದು ಮಣಿಯ ಮಾಳಿಗಿ

music

ಮುರುಕು ತೊಳೆಯು ಹುಳುಕು ಜಂತಿ
ಕೊರೆದು  ಸರಿದು  ಕೀಲ  ಸಡಲಿ 
ಮುರುಕು ತೊಳೆಯು ಹುಳುಕು ಜಂತಿ
ಕೊರೆದು  ಸರಿದು  ಕೀಲ  ಸಡಲಿ 
ಹರಕು  ಚಪ್ಪರ  ಜೆರುಗಿಂಡಿ 
ಮೇಲಕೇರಿ  ಮೆಟ್ಟಲಾರೆ 
ಸೋರುತಿಹುದು ಮಣಿಯ ಮಾಳಿಗಿ, ಅಜ್ಞಾನದಿಂದ 
ಸೋರುತಿಹುದು ಮಣಿಯ ಮಾಳಿಗಿ

music

ಕಾಂತೆ  ಕೇಳೆ  ಕರುಣದಿಂದ 
ಬಂತು  ಕಾಣೆ  ಹುಬ್ಬಿ  ಮಳೆಯೂ   
ಕಾಂತೆ  ಕೇಳೆ  ಕರುಣದಿಂದ 
ಬಂತು  ಕಾಣೆ  ಹುಬ್ಬಿ  ಮಳೆಯೂ 
ಎಂತೋ  ಶಿಶುನಾಲಾಧೀಶ  ತಾನು
ಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇಹೇ
ಎಂತೋ  ಶಿಶುನಾಲಾಧೀಶ  ತಾನು
ನಿಂತು  ಪೊರೆವನು  ಎಂದು  ನಂಬಿದೆ 

ಸೋರುತಿಹುದು ಮಣಿಯ ಮಾಳಿಗಿ, ಅಜ್ಞಾನದಿಂದ 
ಸೋರುತಿಹುದು ಮಣಿಯ ಮಾಳಿಗಿ

music

VIDEO:

Wednesday 29 October 2014

ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ (ದೇವತಾ ಮನುಷ್ಯ)

ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ 
ಹಾಲಲ್ಲಿ ಕೆನೆಯಾಗಿ, ನೀರಲ್ಲಿ  ಮೀನಾಗಿ , ಹಾಯಗಿರುವೆ  ರಾಘವೇಂದ್ರ 
ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ 
ಹಾಲಲ್ಲಿ ಕೆನೆಯಾಗಿ, ನೀರಲ್ಲಿ  ಮೀನಾಗಿ , ಹಾಯಗಿರುವೆ  ರಾಘವೇಂದ್ರ 
ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ 

ಮುಳ್ಳಲ್ಲಾದರು  ನೂಕು , ಕಲ್ಲಲ್ಲಾದರು  ನೂಕು , ರಾಘವೇಂದ್ರ 
ಮುಳ್ಳಲ್ಲಾದರು  ನೂಕು , ಕಲ್ಲಲ್ಲಾದರು  ನೂಕು , ರಾಘವೇಂದ್ರ 
ಮುಳ್ಳಲ್ಲಿ  ಮುಳ್ಳಾಗಿ , ಕಲ್ಲಲ್ಲಿ  ಕಲ್ಲಾಗಿ , ಒಂಧಾಗಿರುವೆ  ರಾಘವೇಂದ್ರ 
ಬಿಸಿಲ್ಲಲೇ  ಒಣಗಿಸು , ನೆರಳಲೆ  ಮಲಗಿಸು , ರಾಘವೇಂದ್ರ 
ಬಿಸಿಲ್ಲಾಲ್ಲಿ  ಕೆಂಪಾಗಿ , ನೆರಳಲ್ಲಿ  ತಂಪಾಗಿ  ನಗುನಗುತ  ಇರುವೆ  ರಾಘವೇಂದ್ರ 

ಹಾಲಲ್ಲಾದರು ಹಾಕು, ನಿರಲ್ಲಾಧರು ಹಾಕು, ರಾಘವೇಂದ್ರ 

ಸುಖವನ್ನೇ  ನೀಡೆಂದು  ಎಂದು   ಕೇಳೆನು  ನಾನು  ರಾಘವೇಂದ್ರ 

ಸುಖವನ್ನೇ  ನೀಡೆಂದು  ಎಂದು   ಕೇಳೆನು  ನಾನು  ರಾಘವೇಂದ್ರ 
ಮುನ್ನ  ಮಾಡಿದ   ಪಾಪ  ಯಾರ  ತಾತನ  ಗಂಟು 
ಮುನ್ನ  ಮಾಡಿದ  ಪಾಪ  ಯಾರ  ತಾತನ  ಗಂಟು 
ನೀನೆ  ಹೇಳು  ರಾಘವೇಂದ್ರ 
ಎಲ್ಲಿಧ್ಧೆರೆನು  ನಾ , ಹೇಗಿಧ್ಧರೆನು  ನಾ, ರಾಘವೇಂದ್ರ 
ನಿನ್ನಲ್ಲಿ  ಶರಣಾಗಿ  ನೀ   ನನ್ನ  ಉಸಿರಾಗಿ 
ಬಾಳಿದರೆ  ಸಾಕು  ರಾಘವೇಂದ್ರ 

ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ 
ಹಾಲಲ್ಲಿ ಕೆನೆಯಾಗಿ, ನೀರಲ್ಲಿ  ಮೀನಾಗಿ , ಹಾಯಗಿರುವೆ  ರಾಘವೇಂದ್ರ 
ಹಾಲಲ್ಲಾದರು ಹಾಕು, ನಿರಲ್ಲಾದರು ಹಾಕು, ರಾಘವೇಂದ್ರ 

Tuesday 28 October 2014

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು (ಹೊಂಬಿಸಿಲು)

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,  ನನ್ನ ಬಿಟ್ಟು ನಿನ್ನ, ಜೀವನ ಸಾಗದು .... ಜೀವನ ಸಾಗದು .....

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

music

ಸೂರ್ಯ ಬರದೆ ಕಮಲವೆಂದು ಅರಳದು, ಚಂದ್ರನಿರದೆ ತಾರೆ ಎಂದು ನಲಿಯದು.....
ಸೂರ್ಯ ಬರದೆ ಕಮಲವೆಂದು ಅರಳದು, ಚಂದ್ರನಿರದೆ ತಾರೆ ಎಂದು ನಲಿಯದು.....
ಒಲವು ಮೂಡದಿರಲು ಮನವು ಅರಳದು, ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,  ನನ್ನ ಬಿಟ್ಟು ನಿನ್ನ, ಜೀವನ ಸಾಗದು .... ಜೀವನ ಸಾಗದು .....

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

music

ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈಸೆರೆ ....
ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈಸೆರೆ ....
ಕೂಡಿ ನಲಿವ ಆಸೆ ಮನದಿ ಕಾದಿದೆ, ಹಿತವು ಎಲ್ಲಿ ನಾವು ಬೇರೆಯಾದರೆ
ಹಿತವು ಎಲ್ಲಿ ನಾವು ಬೇರೆಯಾದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,  ನನ್ನ ಬಿಟ್ಟು ನಿನ್ನ, ಜೀವನ ಸಾಗದು .... ಜೀವನ ಸಾಗದು .....

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

Monday 27 October 2014

ಇದೆ ನಾಡು, ಇದೆ ಭಾಷೆ, ಎಂದೆಂದೂ ನಮ್ಮದಾಗಿರಲಿ(ತಿರುಗುಬಾಣ)

ಇದೆ ನಾಡು,  ಇದೆ ಭಾಷೆ,  ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ,  ಹೇಗೆ ಇರಲಿ,  ಕನ್ನಡವೇ ನಮ್ಮ ಉಸಿರಲ್ಲಿ .

ಇದೆ ನಾಡು,  ಇದೆ ಭಾಷೆ,  ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ,  ಹೇಗೆ ಇರಲಿ,  ಕನ್ನಡವೇ ನಮ್ಮ ಉಸಿರಲ್ಲಿ .
Music
ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,
Music
ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು

ಇದೆ ನಾಡು,  ಇದೆ ಭಾಷೆ,  ಎಂದೆಂದೂ ನಮ್ಮದಾಗಿರಲಿeee, 
Music
ಚಾಮುಂಡಿ ರಕ್ಷೆಯು ನಮಗೆ, ಗೊಮಟೆಷ ಕಾವಲು ಇಲ್ಲಿ,
Music
ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಇದೆ ನಾಡು,  ಇದೆ ಭಾಷೆ,  ಎಂದೆಂದೂ ನಮ್ಮದಾಗಿರಲಿeee, 
Music
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,
Music
ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ,
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ